ಪ್ರೀತಿಯ ಪ್ರತಿರೂಪ ಅಮ್ಮ ,
ಸ್ನೇಹದ ಪ್ರತಿಬಿಂಬ ಅಮ್ಮ,
ಮಮತೆಯ ಸಾಗರ ಈ ಅಮ್ಮ,
ಅಮ್ಮ ನಿನಗೆ ಸಾವಿರ ನಮನ.... ೧
ಪದಸಾಲದು ನಿನ್ನ ಬಣ್ಣಿಸಲು,
ಜನ್ಮ ಸಾಲದು ಋಣ ತೀರಿಸಲು,
ಅಮ್ಮ.... ನೀ ಅದಮ್ಯ ಚೇತನ...
ಓ ಅಮ್ಮ... ನಿನಗೆ ಕೋಟಿ ನಮನ.... ೨
ಸೋತಾಗ ಸಂತೈಸಿ, ಗೆದ್ದಾಗ ಹರಸಿ,
ಅತ್ತಾಗ ಕಣ್ಣೊರಸಿ, ನಕ್ಕಾಗ ಕಣ್ಣರಳಿಸಿ
ತನ್ನುಸಿರಿನಲಿ, ನನ್ನಉಸಿರ ಅರಳಿಸಿ
ನನ್ನೀ ಜೀವನದ ದಾರಿದೀವಿಗೆಯಾದಳು
ಓ ಜನನಿ ... ನಿನಗೆ ಅನಂತ ನಮನ .... ೩
ತನ್ನ ಬೇಸರವ ಮರೆತು, ನನ್ನ ಸಂತೋಷವ ಅರಿತು,
ತಾಕಂಡಳು ನಗುವಿನ ಹನಿ,
ನನ್ನ ಜೀವನದ ಸ್ಫೂರ್ತಿ ನೀ
ಬದುಕಿನ ಪಾಠದ ಓ ಜನನಿ
ಓ ಜನನಿ ನಿನಗೆ ಕೋಟಿ ನಮನ ... ೪
No comments:
Post a Comment