Wednesday, 18 January 2017

ಪ್ರೇಮ ಕವನ

ಪ್ರೇಮ ಕವನ :

ಮನದಲಿ ಅರಳಿದ ಗಾನದಲಿ,
ನವ ಪ್ರೇಮದ ರಾಗದಲಿ,
ಹೃದಯ ಮಿಡಿಯಿತು ಶ್ರುತಿಯಲಿ,
ಒಲವಿನ ನಾದದ ಸ್ವರದಲಿ,

ಪ್ರೀತಿ ಪಲ್ಲವಿ ಹಾಡಿನಲಿ,
ಸ್ನೇಹ ಚರಣವ ನುಡಿಸುತಲಿ,
ಜೀವನ ಸಂಗೀತದ ಲಯದಲಿ,
ಮನ ಗುನುಗಿತು ನವ ಭಾವದ ಸರಿಗಮದಲಿ,

ಮಧುರ ಕನಸಿನ ಇರುಳಿನಲಿ,
ಹಗುರ ಮನಸಿನ ಮುಂಜಾವಿನಲಿ,
ಚಿಗುರು ಪ್ರಣಯದ ಯಾನದಲಿ,
ಅಮರ ಪ್ರೇಮದ ಭ್ರಮೆಯಲಿ.... !!!


By-ಶ್ರೀನಿವಾಸ್  ತೋಟದಳ್ಳಿ.
ಇದು ಕೇವಲ ಕಾಲ್ಪನಿಕ ಅಭಿರುಚಿಯ ಅನಾವರಣ ಅಷ್ಟೇ.













Thursday, 12 January 2017

ಅಮ್ಮ


ಪ್ರೀತಿಯ ಪ್ರತಿರೂಪ ಅಮ್ಮ ,
ಸ್ನೇಹದ ಪ್ರತಿಬಿಂಬ ಅಮ್ಮ,
ಮಮತೆಯ ಸಾಗರ ಈ ಅಮ್ಮ,
ಅಮ್ಮ ನಿನಗೆ ಸಾವಿರ  ನಮನ.... ೧

ಪದಸಾಲದು ನಿನ್ನ ಬಣ್ಣಿಸಲು,
ಜನ್ಮ ಸಾಲದು ಋಣ ತೀರಿಸಲು,
ಅಮ್ಮ.... ನೀ ಅದಮ್ಯ ಚೇತನ...
ಓ ಅಮ್ಮ...  ನಿನಗೆ ಕೋಟಿ ನಮನ.... ೨

ಸೋತಾಗ ಸಂತೈಸಿ, ಗೆದ್ದಾಗ ಹರಸಿ,
ಅತ್ತಾಗ ಕಣ್ಣೊರಸಿ, ನಕ್ಕಾಗ ಕಣ್ಣರಳಿಸಿ
ತನ್ನುಸಿರಿನಲಿ, ನನ್ನಉಸಿರ ಅರಳಿಸಿ
ನನ್ನೀ ಜೀವನದ ದಾರಿದೀವಿಗೆಯಾದಳು
ಓ ಜನನಿ ... ನಿನಗೆ ಅನಂತ ನಮನ .... ೩

ತನ್ನ ಬೇಸರವ ಮರೆತು, ನನ್ನ ಸಂತೋಷವ ಅರಿತು,
ತಾಕಂಡಳು ನಗುವಿನ  ಹನಿ,
ನನ್ನ ಜೀವನದ ಸ್ಫೂರ್ತಿ ನೀ
ಬದುಕಿನ ಪಾಠದ ಓ ಜನನಿ
ಓ ಜನನಿ ನಿನಗೆ ಕೋಟಿ ನಮನ ... ೪